Indian Railways: ರೈಲು ಟಿಕೆಟ್ ಬುಕ್ ಮಾಡಿ ಉಡುಗೊರೆ ಪಡೆದು, ಚಲಿಸುವ ರೈಲಿನಲ್ಲಿ ಉಚಿತವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಿ

IRCTC latest Offer News - ಐಆರ್‌ಸಿಟಿಸಿ (IRCTC)  ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ತೇಜಸ್ ಎಕ್ಸ್‌ಪ್ರೆಸ್‌ನ (Tejas Express) ಈ ಕೊಡುಗೆಯ ಬಗ್ಗೆ ಮಾಹಿತಿಯನ್ನು ನೀಡಿದೆ.

Written by - Nitin Tabib | Last Updated : Aug 31, 2021, 12:23 PM IST
  • ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಿಗುತ್ತಿದೆ ಗಿಫ್ಟ್.
  • ಡ್ರಾ ಹೇಗೆ ನಡೆಸಲಾಗುತ್ತದೆ ಮತ್ತು ವಿಜೇತರ ಹೆಸರು ಹೇಗೆ ಘೋಶಿಸಲಾಗುತ್ತದೆ?
  • ನಿತ್ಯ ಸುಮಾರು 13 ಯಾತ್ರಿಗಳಿಗೆ ಸಿಗುತ್ತದೆ ಈ ಸ್ಪೆಷಲ್ ಗಿಫ್ಟ್
Indian Railways: ರೈಲು ಟಿಕೆಟ್ ಬುಕ್ ಮಾಡಿ ಉಡುಗೊರೆ ಪಡೆದು, ಚಲಿಸುವ ರೈಲಿನಲ್ಲಿ ಉಚಿತವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಿ title=
IRCTC latest Offer News (File Photo)

ನವದೆಹಲಿ: IRCTC latest Offer News - ನೀವು ಕೂಡ ಒಂದು ವೇಳೆ ರೈಲಿನಲ್ಲಿ ಪ್ರಯಾಣಿಸಲು ಯೋಜನೆ ರೂಪಿಸುತ್ತಿದ್ದರೆ, ಇಲ್ಲಿನೆ ನಿಮಗೊಂದು ಒಳ್ಳೆಯ ಸುದ್ದಿ. IRCTC ತೇಜಸ್ ಎಕ್ಸ್ ಪ್ರೆಸ್  (Tejas Express) ರೈಲ್ವೆ ಪ್ರಯಾಣಿಕರಿಗಾಗಿ ವಿಶೇಷ ಕೊಡುಗೆಯನ್ನು ತಂದಿದೆ. ಈಗ ನೀವು ಚಲಿಸುವ ರೈಲಿನಲ್ಲಿ ನಿಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬಹುದು. ಹೌದು, ತೇಜಸ್ ಪ್ರಯಾಣಿಕರು ಲಕ್ಕಿ ಡ್ರಾ ಮೂಲಕ ಬಹುಮಾನಗಳನ್ನು ಗೆಲ್ಲಬಹುದು ಮತ್ತು ಇದಕ್ಕಾಗಿ ಅವರು ಏನೂ  ಮಾಡುವ ಅಗತ್ಯವಿಲ್ಲ. ನೀವು ಟಿಕೆಟ್ ಖರೀದಿಸಿದ ತಕ್ಷಣ ಬಹುಮಾನಗಳನ್ನು ಗೆಲ್ಲುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಐಆರ್‌ಸಿಟಿಸಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ತೇಜಸ್ ಎಕ್ಸ್‌ಪ್ರೆಸ್‌ನ ಈ ಕೊಡುಗೆಯ ಬಗ್ಗೆ ಮಾಹಿತಿಯನ್ನು ನೀಡಿದೆ.

ಪ್ರಯಾಣದ ಜೊತೆಗೆ ಆಕರ್ಷಕ ಉಡುಗೊರೆ
ತೇಜಸ್ ಎಕ್ಸ್‌ಪ್ರೆಸ್ ತನ್ನ ಪ್ರಯಾಣಿಕರಿಗಾಗಿ ಲಕ್ಕಿ ಡ್ರಾ ಯೋಜನೆಯನ್ನು ಆರಂಭಿಸಿದೆ. ಇದರ ಅಡಿಯಲ್ಲಿ, ಆಗಸ್ಟ್ 27 ರಿಂದ ಸೆಪ್ಟೆಂಬರ್ 6 ರವರೆಗೆ ಉತ್ತಮ ಉಡುಗೊರೆ ಲಭ್ಯ ಇರಲಿವೆ. ತೇಜಸ್ ಎಕ್ಸ್‌ಪ್ರೆಸ್ ಐಆರ್‌ಸಿಟಿಸಿ ನಿರ್ವಹಿಸುತ್ತಿರುವ ದೇಶದ ಮೊದಲ ಖಾಸಗಿ ರೈಲಾಗಿದೆ ಎಂಬುದು ಇಲ್ಲಿ ಗಮನಾರ್ಹ. ಈ ರೈಲು ತನ್ನ ಪ್ರಯಾಣಿಕರನ್ನು ಓಲೈಸಲು ಕಾಲಕಾಲಕ್ಕೆ ವಿವಿಧ ಕೊಡುಗೆಗಳನ್ನು ನೀಡುತ್ತಲೇ ಇರುತ್ತದೆ.

ಒಂದು ವೇಳೆ ನಿಮ್ಮ ರೈಲ್ವೆ ಟಿಕೆಟ್ ಅನ್ನು ಬೇರಾರೋ ಬುಕ್ ಮಾಡಿದ್ದು, IRCTC ಬಳಿ ನಿಮ್ಮ ಜನ್ಮ ದಿನಾಂಕದ ಮಾಹಿತಿ ಇಲ್ಲ ಎಂದ ಪರಿಸ್ಥಿತಿಯಲ್ಲಿ, ನೀವು ತೇಜಸ್ ಎಕ್ಸ್ ಪ್ರೆಸ್ ಸಿಬ್ಬಂದಿಗೆ ನೀವು ಹುಟ್ಟಿದ ದಿನಾಂಕದ ಮಾಹಿತಿಯನ್ನು ಸ್ಟೇಷನ್ ನಲ್ಲಿ ಒದಗಿಸಬಹುದು. ಏಕೆಂದರೆ, ಕೇಕ್ ಗಾಗಿ ಮುಂಗಡ ಆರ್ಡರ್ ನೀಡಲಾಗುತ್ತದೆ.

ಇದನ್ನೂ ಓದಿ-Ganesh Chaturthi 2021: ಗಣೇಶೋತ್ಸವ ಪ್ರಯುಕ್ತ 200 ವಿಶೇಷ ರೈಲು ಸೇವೆ

ನಿತ್ಯ 13 ಪ್ರಯಾಣಿಕರಿಗೆ ಉಡುಗೊರೆಯ ಲಾಭ ಸಿಗುತ್ತದೆ (Indian Railways Latest Offer)
ಲಕ್ಕಿ ಡ್ರಾ ಯೋಜನೆಯಲ್ಲಿ ಬಹುಮಾನ ವಿಜೇತ ಪ್ರಯಾಣಿಕರನ್ನು ಆಯ್ಕೆ ಮಾಡಲು ವಿಶೇಷ ಪ್ರಕ್ತಿಯೇ ನಡೆಯುತ್ತದೆ.  ಪ್ರತಿ ದಿನ 13 ಪ್ರಯಾಣಿಕರಿಗೆ ತೇಜಸ್ ಎಕ್ಸ್‌ಪ್ರೆಸ್ ಕೊಡುಗೆ ನೀಡಲಾಗುತ್ತಿದೆ. ಆಗಸ್ಟ್ 27 ರಂದು ಮೊದಲ ಬಾರಿಗೆ ಪ್ರಾರಂಭವಾದಾಗ, ಕೆಲವು ಪ್ರಯಾಣಿಕರು ಸರ್ಪ್ರೈಸ್ ಆಗಿ ಬಂದ ಉಡುಗೊರೆಯನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಕಂಪ್ಯೂಟರ್ ಚೇರ್ ಕಾರಿನಲ್ಲಿ ಪ್ರಯಾಣಿಸುವ 10 ಪ್ರಯಾಣಿಕರಿಗೆ ಮತ್ತು ಕಾರ್ಯನಿರ್ವಾಹಕ ತರಗತಿಯಲ್ಲಿ ಪ್ರಯಾಣಿಸುವ 3 ಪ್ರಯಾಣಿಕರಿಗೆ ಪ್ರತಿದಿನ ಉಡುಗೊರೆಗಳನ್ನು ವಿತರಿಸಲಾಗುತ್ತಿದೆ. ಈ ಪ್ರಕ್ರಿಯೆಯು ಸೆಪ್ಟೆಂಬರ್ 6 ರವರೆಗೆ ಹೀಗೆಯೇ ಮುಂದುವರೆಯಲಿದೆ.

ಇದನ್ನೂ ಓದಿ-Indian Railways: ರೈಲಿನಲ್ಲಿ ಕಾಯ್ದಿರಿಸಿದ ಟಿಕೆಟ್ ರದ್ದುಗೊಳಿಸುವ ಮೊದಲು IRCTC ಯ ಈ ನಿಯಮ ನಿಮಗೂ ಗೊತ್ತಿರಲಿ

ಈ ರೀತಿ ವಿಜೇತರ ಹೆಸರನ್ನು ಘೋಷಿಸಲಾಗುತ್ತದೆ (Indian Railways Latest News)
ಲಕ್ನೋ ಮತ್ತು ನವದೆಹಲಿ ನಡುವೆ ಸಂಚರಿಸುವ ತೇಜಸ್ ಎಕ್ಸ್‌ಪ್ರೆಸ್‌ನ ಪ್ರಯಾಣಿಕರ PNR ಸಂಖ್ಯೆಯ ಆಧಾರದ ಮೇಲೆ ಉಡುಗೊರೆಯನ್ನು ನೀಡಲಾಗುತ್ತದೆ. ಆನ್‌ಲೈನ್‌ನಲ್ಲಿ ಮಾಡಿದ ಟಿಕೆಟ್‌ಗಳಲ್ಲಿ, ಐಆರ್‌ಸಿಟಿಸಿಯ ಐಟಿ ತಂಡವು ಲಕ್ಕಿ ಡ್ರಾದಲ್ಲಿ 13 ಜನರ ಹೆಸರನ್ನು ಆಯ್ಕೆ ಮಾಡುತ್ತದೆ. ಅದರ ನಂತರ ಆ ಜನರಿಗೆ ರೈಲ್ವೆಯಿಂದ ಉಡುಗೊರೆ ನೀಡಲಾಗುತ್ತದೆ. ತೇಜಸ್ ಎಕ್ಸ್ ಪ್ರೆಸ್ ಆಧುನಿಕ ಸೌಲಭ್ಯಗಳ ದೃಷ್ಟಿಯಿಂದ ಇತರ ರೈಲುಗಳಿಗಿಂತ ಸಾಕಷ್ಟು ಭಿನ್ನವಾಗಿದೆ. ಇದರ ಬಾಡಿಗೆ ಕೂಡ ತುಂಬಾ ಹೆಚ್ಚಿರುವುದಕ್ಕೆ ಇದು ಕಾರಣವಾಗಿದೆ.

ಇದನ್ನೂ ಓದಿ-IRCTC ಟಿಕೆಟ್ ಬುಕಿಂಗ್ ನಿಯಮದಲ್ಲಿ ಬದಲಾವಣೆ! ಈಗ ಈ ಕೆಲಸ ಮಾಡಿದರಷ್ಟೇ ಸೀಟ್ ರಿಸರ್ವೇಶನ್ ಸಾಧ್ಯ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News